ಪುಸ್ತಕ ಅವಲೋಕನ 2
ರಮೇಶ ಸಕ್ರಗೌಡ್ರ. (M.sc.B.ed)
ಸಹಶಿಕ್ಷಕರು (9164034118)
ಸ.ಹಿ.ಪ್ರಾ.ಶಾಲೆ.ಪೋತ್ನಾಳ್.
ತಾ:ಮಾನವಿ
ಜಿ:ರಾಯಚೂರು (sakragoudra@gmail.com)
ಆಯ್ಕೆ ಮಾಡಿಕೂಂಡ ಪುಸ್ತಕಗಳು
ರಾಷ್ಟ್ರಜಾಗೃತಿ -- ಸ್ವಾಮಿ ವಿವೇಕಾನಂದ
ಮರೆತುಹೋದ ಮಹಾಸಾಮ್ರಾಜ್ಯ.--ರಾಬರ್ಟ ಶಿವೆಲ್
ತರಗತಿ ನಿರ್ವಹಣೆ.--ಪರಮೇಶ್ವರಯ್ಯ ಸೊಪ್ಪನಮಠ್.
ಪುಸ್ತಕದ ಹೆಸರು :- ಮರೆತುಹೋದ ಮಹಾಸಾಮ್ರಾಜ್ಯ.
A Forgotten Empire -Vijayanagar
ಮೂಲ ಲೇಖಕರು :- Robert sewell
ಕನ್ನಡಕ್ಕೆ ಅನುವಾದ :- ಸದಾನಂದ ಕನವಳ್ಳಿ
ಪುಸ್ತಕದ ಅವಲೋಕನ
ಪೀಠಿಕೆ
ಕೇಳಿಸದೆ ಕಲ್ಲುಕಲ್ಲಿನಲ್ಲಿ ಕನ್ನಡ ನುಡಿ ಕಾಣಿಸದೆ ಹೊನ್ನಚರಿತೆಯಲ್ಲಿ ಹಂಪಿಯ ಗುಡಿ................ಎಂಬ ಹಾಡು ಹಾಗೂ ಕರ್ನಾಟಕದ ಇತಿಹಾಸದಲಿ ಬಂಗಾರದ ಯುಗದ ಕಥಯನ್ನು ನಾ ಹಾಡುವೇ ಕೇಳಿ..........ಎಂಬ ಇನ್ನೊಂದು ಹಾಡು ನಮಗೆ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯ ಬಗ್ಗೆ ಆಸಕ್ತಿಯನ್ನು ಉಂಟುಮಾಡುತ್ತವೆ.
ರಾಷ್ಟ್ರಕವಿ ಕುವೆಂಪು ರವರು ತಮ್ಮ "ಕನ್ನಡವೇ ಸತ್ಯ" ಎಂಬ ಭಾವಗೀತೆಯಲ್ಲಿ ಹಾಳಾಗಿಯ ಹಂಪಿಗೆ ಕೊರಗುವ ಮನ ಎಂದಿದ್ದಾರೆ.
ಈ ಹಾಳು ಹಂಪಿಯ ಬಗ್ಗೆ ಹಾಗೂ ವಿಜಯನಗರ ಸಾಮ್ರಾಜ್ಯದ ಬಗ್ಗೆ ತಿಳಿಯಲು ಅನೇಕ ಪಠ್ಯಪುಸ್ತಕಗಳನ್ನು ಹಾಗೂ ಇತಿಹಾಸದ ಪುಸ್ತಕಗಳನ್ನು ಓದಿದಾಗಲು ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಂಪೂರ್ಣ ಮಾಹಿತಿ ದೊರಕುವುದಿಲ್ಲ , ಈ ಕೊರತೆಯನ್ನು ನೀಗಿಸುವ ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಪುಸ್ತಕವೇ Robert sewell ಅವರು ಬರೆದ A Forgotten Empire - Vijayanagar .
ಅವಲೋಕನ :-
Robert sewell ಅವರು ಒಬ್ಬ ಬ್ರಿಟೀಷ ಅಧಿಕಾರಿ .ಮದ್ರಾಸ್ ಪ್ರಾಂತ್ಯದ ಅಧಿಕಾರಿಯಾಗಿದ್ದಾಗ ಬಳ್ಳಾರಿಯು ಮದ್ರಾಸ್ ಪ್ರಾಂತ್ಯದ ಮುಖ್ಯನಗರ ವಾಗಿದ್ದು ಈ ಪ್ರದೇಶದಲ್ಲಿ ಇರುವ ಹಂಪಿಯ ಬಗ್ಗೆ ಆಸಕ್ತಿ ಉಂಟಾಗಿ ಆದರ ಇತಿಹಾಸ ತಿಳಿಯಲು ಅನೇಕ ಪುಸ್ತಕಗಳನ್ನು ಹಾಗೂ ಜನರನ್ನು ವಿಚಾರಿಸಲಾಗಿ ಎಲ್ಲಿಯೂ ಸಹ ಈ ಸಾಮ್ರಾಜ್ಯದ ಬಗ್ಗೆ ಸರಿಯಾದ ಮಾಹಿತಿ ದೊರೆಯದ ಕಾರಣ ಬಹಳ ದುಃಖಿತರಾಗಿ ತಾವೇ ಈ ಸಾಮ್ರಾಜ್ಯದ ಬಗ್ಗೆ ಅಧ್ಯಾಯನ ಕೈಗೊಂಡ ಫಲವಾಗಿ ದೊರೆತ ಅಮೂಲ್ಯ ಗ್ರಂಥವೇ A Forgotten Empire -Vijayanagar.
ಈ ಪುಸ್ತಕ ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಹಾಗೂ ಅಂತ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ.1336 ರಲ್ಲಿ ಹಕ್ಕಬುಕ್ಕರಿಂದ ಸ್ಥಾಪನೆಯಾದ ಈ ಸಾಮ್ರಾಜ್ಯ ಶ್ರೀಕೃಷ್ಣದೇವರಾಯನ ಕಾಲದಲ್ಲಿ ಉತ್ತುಂಗದ ಸ್ಥಿತಿಯನ್ನು ತಲುಪಿ ಪ್ರಪಂಚದ ಅತೀ ಬಲಿಷ್ಠವಾದ ಮತ್ತು ವೈಭವಯುತವಾದ ಹಾಗೂ ಶ್ರೀಮಂತ ಸಾಮ್ರಾಜ್ಯವಾಗಿ ಸುಮಾರು ಶತಮಾನಗಳ ಕಾಲ ಆಡಳಿತ ನೆಡೆಸುತ್ತಾರೆ.ತಾಳಿಕೋಟೆ ಕದನದಲ್ಲಿ ಅಳಿಯ ರಾಮರಾಯನ ವೀರಮರಣದೊಂದಿಗೆ ಸಾಮ್ರಾಜ್ಯದ ಅಂತ್ಯವಾಗುತ್ತದೆ ,ಅದು ಅಂತಿಂತ ಅಂತ್ಯವಲ್ಲ ದಖ್ಖನಿನ ಸುಲ್ತಾನರು ರಾಜಧಾನಿ ಹಂಪಿಯನ್ನು ಸುಮಾರು ತಿಂಗಳುಗಳ ಕಾಲ ಸರ್ವನಾಶ ಮಾಡಿ ಎಲ್ಲವನ್ನು ದೋಚಿದರು. ಒಂದು ಕಾಲದಲ್ಲಿ ಜನಜಂಗುಳಿ ಇಂದ ಇದ್ದ, ಶ್ರೀಮಂತ ನಗರವೆಂದು ಕರೆಸಿಕೊಳ್ಳುತ್ತಿದ್ದ ನಗರ ಮರುದಿನ ಕಾಡುಪ್ರಾಣಿಗಳಿಂದ ಕೂಡಿದ ಕಾಡಾಗಿತ್ತು .ತಾಳಿಕೋಟಿ ಕದನ ಬರಿ ಯುದ್ಧವಾಗದೆ ಧಾರ್ಮಿಕ ಯುದ್ಧವಾಗಿತ್ತು ಹಾಗಾಗಿ ಹಂಪಿಯಲ್ಲಿದ್ದ ಸುಮಾರು ದೇವಸ್ಥಾನಗಳನ್ನು ಹಾಗೂ ಪೂಜಾ ಸ್ಥಳಗಳು ಸರ್ವನಾಶ ಮಾಡಲಾಯಿತು.ಈಗ ಹಂಪಿ ಕೇವಲ ಹಾಳು ಹಂಪಿಯಾಗಿ ಗತಕಾಲದ ವೈಭವವನ್ನು ಸಾರುತ್ತಿದೆ.
ಇನ್ನಿತರ ಹಲವಾರು ವಿಷಯಗಳನ್ನು ಈ ಪುಸ್ತಕ ಒಳಗೊಂಡಿದೆ. ಪ್ರತಿಯೊಬ್ಬ ಭಾರತಿಯ ಈ ಪುಸ್ತಕವನ್ನು ಓದಿ ಮತ್ತು Open air museum ಆದ ಹಂಪಿಗೆ ಭೇಟಿ ನೀಡಿ. ನಮ್ಮ ಕಳೆದು ಹೋದ ಇತಿಹಾಸವನ್ನು ಮರಳಿ ನೀಡಿದ Robert sewell ಅವರಿಗೆ ಅನಂತ ಕೋಟಿ ನಮನಗಳು .
ಪ್ರಭಾವ ಬೀರಿದ ಅಂಶಗಳು :-
▶️ Each class of men belonging to each profession has shops contiguous the one to the other, the jewelers sell publicly in the bazars pearls rubies emeralds and diamonds
----- Abdur Razzak ( a parsian ambassador)
▶️ I never saw a place like this .
---- Nicolo conti (1420)
▶️ Never perhaps in the history of the world has such havoc been wrought and wrought so suddenly on so splendid city.
---- Robert sewell
ತರಗತಿ ಕೋಣೆಯಲ್ಲಿ ಇದರ ಉಪಯೋಗ :-
1.ಮಕ್ಕಳಿಗೆ ಇತಿಹಾಸದ ಅಧ್ಯಾಯನದ ಮಹತ್ವ ತಿಳಿಯುತ್ತದೆ.
2.ನಮ್ಮ ಸಂಸ್ಕ್ರತಿ ಹಾಗೂ ಪರಂಪರೆ ಬಗ್ಗೆ ಗೌರವ ಉಂಟಾಗುತ್ತದೆ.
3.ಇತಿಹಾಸದ ಪುಸ್ತಕಗಳನ್ನು ಓದಲು ಕಾತುರರಾಗುತ್ತಾರೆ.
4.ಪ್ರಾಚೀನ ಕಟ್ಟಡಗಳನ್ನು ದೇವಸ್ಥಾನಗಳನ್ನು ಕೋಟೆಗಳನ್ನು ಸಂರಕ್ಷಣಿ ಮಾಡುವ ಮನಸ್ಸು ಮಾಡುತ್ತಾರೆ.
5.ವಿಜಯನಗರ ಸಾಮ್ರಾಜ್ಯ ಕನ್ನಡಿಗರ ಸಾಮ್ರಾಜ್ಯ ಎಂದು ಹೆಮ್ಮೆಪಡುತ್ತಾರೆ.
ಹಂಪಿಯ ಗತಕಾದ ವೈಭವ
ಧನ್ಯವಾದಗಳು
Tags
work from Home